ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸ್ವಾಗತ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಇತಿಹಾಸ

Our Story

ಇತಿಹಾಸ

ನಮ್ಮ ದೇಶದ ಹಿರಿಮೆಯನ್ನು ಹೇಳುವಾಗ ಸಾಮಾನ್ಯವಾಗಿ ನಾವು ಬಳಸುವ ಘೋಷವಾಕ್ಯ “ವಿವಿಧತೆಯಲ್ಲಿ ಏಕತೆ” ಎನ್ನುವುದು. ಅಂತಹುದೇ ಒಂದು ಭಿನ್ನ ನೆಲೆಗಟ್ಟಿನಲ್ಲಿ ನಿಂತಿರುವ, ತನ್ನ ವಿಶಿಷ್ಟವಾದ ಕಛೇ ಕಾರ್ಯವೈಖರಿಯಿಂದ ಹಲವಾರು ಮಹತ್ತರವಾದ ಕಾರ್ಯವಿಧಾನಗಳನ್ನು ಮೊದಲಿಗೆ ಜಾರಿಗೆ ತಂದು ದೇಶದ ಇತರೆ ರಾಜ್ಯಗಳ ಚಿತ್ರೋದ್ಯಮಕ್ಕೆ ಮಾದರಿಯಾದ ಸಂಸ್ಥೆ “ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ”. ವಾಣಿಜ್ಯದ ಉದ್ದೇಶಕ್ಕಾಗಿಯೇ ರೂಪಿತವಾದರೂ ಹಲವಾರು ಸಂದರ್ಭಗಳಲ್ಲಿ ಸಮಾಜಮುಖಿಯಾಗಿಯೂ ಕಾರ್ಯನಿರ್ವಹಿಸಿ ದೇಶದ ಗಮನ ಸೆಳೆದಿರುವ ಈ ಸಂಸ್ಥೆಯ ಅನೇಕ ಯೋಜನೆಗಳು, ಕಾನೂನು ಕಟ್ಟಳೆಗಳು, ಸ್ವಯಂ ನಿಯಂತ್ರಣ ವ್ಯವಸ್ಥೆ-ಮುಂತಾದ ಅನೇಕ ಕಾರ್ಯವಿಧಾನಗಳನ್ನು ದೇಶದ ಚಿತ್ರೋದ್ಯಮದ ಅನೇಕ ಸಂಘ ಸಂಸ್ಥೆಗಳು ಯಥಾವತ್ತಾಗಿ ಅಳವಡಿಸಿಕೊಂಡಿರುವುದು ಮಂಡಳಿಯ ಹಿರಿಮೆಗೆ ಸಾಕ್ಷಿ.

Karnataka film chamber of commerce

81

Years of experience

6000

Members

1500

Movies

ಸದಸ್ಯತ್ವದ ಸಂಖ್ಯೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಾಯತ್ವದ ಸಂಖ್ಯೆ

5985+

ನಿರ್ಮಾಪಕರು

750+

ವಿತರಕರು

12

ಪ್ರದರ್ಶಕರು

History

ಹುಟ್ಟು

ನಮ್ಮ ದೇಶದಲ್ಲಿ ಬಹುಪಾಲು ಸಂಘಟನೆಗಳು ಹುಟ್ಟುವುದು ಹಸಿವಿನ ತಳಹದಿಯಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನಗೆ ಅಗತ್ಯವಾದದ್ದನ್ನು ಸಂಬಂಧಿಸಿದ ಆಡಳಿತಶಾಹಿಯಿಂದ ಪಡೆಯಲು ಸಾಧ್ಯವಾಗದಿದ್ದಾಗ ಮನುಷ್ಯ ತನ್ನ ಒಂಟಿತನವನ್ನು ತೊರೆದು ಸಮಾನರಾಗಿ ಬಾಧಿತರಾದವರೊಂದಿಗೆ ಸಂಘಟಿತನಾಗುತ್ತಾನೆ. ಈ ಮೂಲಕ ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಾನೆ. ಇಂದು ಸಂಪೂರ್ಣ ಸ್ವಾವಲಂಬಿಯಾಗಿ ಬೃಹದಾಕಾರವಾಗಿ ಬೆಳೆದಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹುಟ್ಟು ಕೂಡ ಇತಹದೇ ಒಂದು ಸಣ್ಣ ಸಮಸ್ಯೆಯ ತಳಹದಿಯಲ್ಲೇ ಆರಂಭವಾದದ್ದು ಕುತೂಹಲಕರ.

೧೯೩೪ರಲ್ಲಿ ಕನ್ನಡದ ಪ್ರಪ್ರಥಮ ವಾಕ್ಷಿತ್ರ “ಸತಿಸುಲೋಚನ” ತೆರೆಕಾಣುವ ಮೊದಲೇ ಕರ್ನಾಟಕದಲ್ಲಿ (ಅಂದಿನ ಮೈಸೂರು ರಾಜ್ಯ) ಹಲವಾರು ಚಿತ್ರಮಂದಿರಗಳು ತಲೆಯೆತ್ತಿದ್ದವು. ೧೯೪೪ರ ವೇಳೆಗಾಗಲೇ ನಮ್ಮ ರಾಜ್ಯದಲ್ಲಿದ್ದ ಚಿತ್ರಮಂದಿರಗಳ ಸಂಖ್ಯೆ ೫೦೦ರ ಗಡಿ ದಾಟಿದ್ದು ಈ ಎಲ್ಲಾ ಚಿತ್ರಮಂದಿರಗಳಲ್ಲಿ ಉಪಯೋಗಿಸುತ್ತಿದ್ದ ಸಿನಿಮಾ ವೀಕ್ಷಣೆಗೆ ಅಗತ್ಯವಾದ, ಬೆಳಕಿನ ಮೂಲವಾದ ಕಾರ್ಬನ್ ಅಂದಿಗೆ ದುರ್ಲಭವಾಗಿತ್ತು. ಹಲವಾರು ವರ್ಷಗಳು ಸರ್ಕಾರ ಈ ವಸ್ತುವನ್ನು ಕೋಟಾ ಪದ್ಧತಿಯಲ್ಲಿ ವಿತರಿಸುತ್ತಿತ್ತು. ಇದರಿಂದ ಹಲವಾರು ಚಿತ್ರಮಂದಿರಗಳ ಚಿತ್ರಪ್ರದರ್ಶನಕ್ಕೂ ಆಡಚಣೆಯಾಗುತ್ತಿತ್ತು. ಇದೇ ವೇಳೆಗೆ ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ತಯಾರಾಗಿದ್ದ ನೂರಾರು ಚಿತ್ರಗಳ ವಿತರಣೆಯ ಸಲುವಾಗಿ ಹಲವಾರು ಚಿತ್ರಹಂಚಿಕಾ ಕಛೇರಿಗಳು ದಕ್ಷಿಣ ಭಾರತದಲ್ಲಿ ಅಸ್ತಿತ್ವಕ್ಕೆ ಬಂದವು. ಹಿಂದಿ ಭಾಷಾ ಚಿತ್ರಗಳನ್ನು ಶ್ರೀಲಂಕಾವು ಸೇರಿದಂತೆ ಇಡೀ ದಕ್ಷಿಣ ಭಾರತಕ್ಕೆ ವಿತರಣೆ ಮಾಡುತ್ತಿದ್ದ ಹಂಚಿಕಾ ಕಛೇರಿಗಳ ಕೇಂದ್ರಸ್ಥಾನ ಬೆಂಗಳೂರು ನಗರವಾಗಿದ್ದೊಂದು ವಿಶೇಷ.

ಅಂತೆಯೇ ಮದ್ರಾಸ್ ನಗರ ದಕ್ಷಿಣದ ಭಾಷೆಗಳ ಚಿತ್ರೋದ್ಯಮದ ಪ್ರಮುಖ ಚಟುವಟಿಕೆ ಕೇಂದ್ರವಾಗಿದ್ದು ಇಲ್ಲಿ ಕೇಂದ್ರ ಕಛೇರಿಯನ್ನು ಹೊಂದಿದ್ದ ಆನೇಕ ವಿತರಣ ಸಂಸ್ಥೆಗಳು ಬೆಂಗಳೂರಿನಲ್ಲಿ ತಮ್ಮ ಶಾಖೆಗಳನ್ನು ಹೊಂದಿದ್ದವು. ಹೀಗಾಗಿ ವಿತರಕರ ಮತ್ತು ಪ್ರದರ್ಶಕರ ಮಧ್ಯೆ ಸಾಮರಸ್ಯದ ಅವಶ್ಯಕತೆಯನ್ನು, ಪ್ರದರ್ಶಕರ ಮೂಲಭೂತ ಸಮಸ್ಯೆಯಾದ ಕಾರ್ಬನ್ ಇತ್ಯಾದಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಒಂದು ಸಂಘಟನೆಯ ಅನಿವಾರ್ಯತೆಯನ್ನು ಮನಗಂಡ ಹಲವು ಹಿರಿಯ ಸಮಾನ ಮನಸ್ಕ ಹಂಚಿಕೆದಾರರು ಮತ್ತು ಪ್ರದರ್ಶಕರು ಹುಟ್ಟುಹಾಕಿದ ಸಂಸ್ಥೆಯೇ ‘ಮೈಸೂರು ಫಿಲಂ ಚೇಂಬರ್ ಆಫ್ ಕಾಮರ್ಸ್” ಪ್ರದರ್ಶಕರಾಗಿದ್ದ ಶ್ರೀಯುತ ದಿ || ರುಖ್‌ಉಲ್ ಮುಲ್ಕ್ ಅಬ್ದುಲ್ ವಾಜಿದ್ ರವರು ಪ್ರಥಮ ಅಧ್ಯಕ್ಷರಾದ ಈ ಸಂಸ್ಥೆ ೧೯೪೪ರ ಆಗಸ್ಟ್ ೨೬ರಂದು ವಿದ್ಯುಕ್ತವಾಗಿ ನೊಂದಾಯಿಸಲ್ಪಟ್ಟಿತು.
ಆರಂಭದ ದಿನಗಳಲ್ಲಿ ಮಂಡಳಿಯ ಸ್ಥಾಪಕ ಸದಸ್ಯರಾದ ಶ್ರೀಯುತ ಕಿಸನ್‌ದಾನ್‌ರವರ ಮನೆಯಲ್ಲಿಯೇ ತನ್ನ ಕಾರ್ಯಚಟುವಟಿಕೆಯನ್ನು ಪ್ರಾರಂಭಿಸಿದ ಈ ಸಂಸ್ಥೆಗೆ ನಂತರ ಇಂದಿನ ಮೂವಿಲ್ಯಾಂಡ್ ಚಿತ್ರಮಂದಿರದ ಹಿಂಬಾಗದಲ್ಲಿ ಪ್ರತ್ಯೇಕವಾದ ಕಚೇರಿಯನ್ನು ಒದಗಿಸಿದವರು ಮತ್ತೊಬ್ಬ ಸ್ಥಾಪಕ ಸದಸ್ಯರಾದ ಶ್ರೀಯುತ ವೈ.ವಿ. ರಂಗಯ್ಯನವರು. ಅಲ್ಲಿಂದ ಪ್ರಭಾತ ಚಿತ್ರಮಂದಿರದ ಆವರಣದಲ್ಲಿ ಕೆಲಕಾಲ, ನಂತರ ಹಲವಾರು ವರ್ಷಗಳ ಕಾಲ ಇಂದಿನ ಆನಂದ್‌ರಾವ್ ವೃತ್ತದ ಸಮೀಪದ ಬಾಡಿಗೆ ಕಚೇರಿಯಲ್ಲಿ ತನ್ನ ಅಲೆಮಾರಿ ಜೀವನವನ್ನು ಸವೆಸಿದ ಸಂಸ್ಥೆಯು ೧೯೭೭-೭೮ರ ವೇಳೆಗೆ ಈಗಿರುವ ಸ್ವಂತ ನೆಲಕ್ಕೆ ಪಾದಾರ್ಪಣೆಗೊಂಡಿತು.
೧೯೭೨ರಲ್ಲಿ ಮಂಡಳಿಯಲ್ಲಿ ಮಹತ್ತರ ಬದಲಾವಣೆಗಳಾದವು. ೧೯೪೪ರಿಂದ ಎರಡು ದಶಕಗಳ ಕಾಲ ಪ್ರದರ್ಶನ ಮತ್ತು ಹಂಚಿಕೆಯ ಈ ಚಟುವಟಿಕೆಗಳಿಗಷ್ಟೇ ಸೀಮಿತವಾಗಿದ್ದ ಮಂಡಳಿಯ ಕಾರ್ಯವ್ಯಾಪ್ತಿ 5 ನಿರ್ಮಾಪಕ ಸದಸ್ಯರ ಸೇರ್ಪಡೆಯೊಂದಿಗೆ ಪರಿಪೂರ್ಣಗೊಂಡಿತು. ಈ ಸಮಯದಲ್ಲಿ ಕನ್ನಡ ಚಿತ್ರೋದ್ಯಮದ ನಿರ್ಮಾಣ ವಿಭಾಗ ಮದ್ರಾಸಿನಿಂದ ತಾಯ್ಯಾಡಿಗೆ ಸ್ಥಳಾಂತರಗೊಳ್ಳತೊಡಗಿತ್ತು.

oplus_0

ಆಡಳಿತ ವ್ಯವಸ್ಥೆ

ಆರಂಭದ ದಿನಗಳಲ್ಲಿ ಯಾರಾದರೊಬ್ಬ ಪ್ರಮುಖರನ್ನು ಗುರುತಿಸಿ ಅವರಿಗೆ ಅಧ್ಯಕ್ಷಪಟ್ಟವನ್ನು ಅವಿರೋಧವಾಗಿ ಕಟ್ಟುತ್ತಿದ್ದದು ಮಂಡಳಿಯ ಪರಿಪಾಠ. ಸುಮಾರು ಎರಡು ದಶಕಗಳಿಗೂ ಹೆಚ್ಚುಕಾಲ ಮಂಡಳಿಯ ಆಡಳಿತವನ್ನು ಸುಧೀರ್ಘ ಅವಧಿಯಲ್ಲಿ ನಡೆಸಿದವರೇ ಹೆಚ್ಚು. ನಿರ್ಮಾಪಕ ಸದಸ್ಯರ ಆಗಮನದೊಂದಿಗೆ ವಿಕಸಿತವಾದ ಮಂಡಳಿಯ ನಿಯಮಾವಳಿಗಳನ್ನು ೧೯೭೨ರಲ್ಲಿ ಅಮೂಲಾಗ್ರವಾಗಿ ಬದಲಾಯಿಸ ಬೇಕಾಯಿತು. ಭಾಷಾವಾರು ಪ್ರಾಂತ್ಯಗಳ ರಚನೆಯಾದ ಮೇಲೆ ಮಂಡಳಿಯ ಹೆಸರನ್ನೂ ಸಹ ನವಂಬರ್ ೧೫, ೧೯೭೨ರಂದು ನಡೆದ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ‘ಮೈಸೂರು ಫಿಲಂ ಚೇಂಬರ್ ಆಫ್ ಕಾಮರ್ಸ್’ ಬದಲಾಗಿ ಸರ್ವಾನುಮತದ ನಿರ್ಣಯದಂತೆ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಎಂದು ಕರೆಯಲಾಯಿತು. ಇದೇ ಅವಧಿಯಲ್ಲಿ ಅಧಿಕಾರದಲ್ಲಿದ್ದ ಎಂ. ಭಕ್ತವತ್ಸಲ ಮತ್ತು ಅವರ ತಂಡ ಮಂಡಳಿಯ ನಡಾವಳಿಗಳಲ್ಲಿ ಮೂರು ವಲಯಗಳ ಸದಸ್ಯರಿಗೆ ಸಮಾನವಾದ ಹಕ್ಕುಗಳನ್ನು ಒದಗಿಸುವ ಉದ್ದೇಶದಿಂದ ಮತ್ತು ಅದೇವೇಳೆಗೆ ಮಂಡಳಿಗೆ ಸಮಾನಾಂತರವಾಗಿ ಉದ್ಭವವಾಗಲಿದ್ದ ಕೆಲವು ಸಂಸ್ಥೆಗಳನ್ನು ಮಂಡಳಿಯಲ್ಲಿ ವಿಲೀನಗೊಳಿಸುವ ದೃಷ್ಟಿಯಿಂದ ವಲಯ ಸಮಿತಿಗಳನ್ನು ರಚಿಸಿ ಆಯಾ ವಲಯಗಳಿಗೆ ಸಂಪೂರ್ಣ ಸ್ವಾಯತ್ತತೆಯನ್ನು ನೀಡುವ ನಿರ್ಣಯವನ್ನು ಮಾಡಿದ್ದಲ್ಲದೆ, ಮಂಡಳಿಯ ಸದಸ್ಯರನ್ನು ಹೊರತುಪಡಿಸಿ ಹೊರಗಿನವರೊಂದಿಗೆ ವ್ಯವಹರಿಸ ಬಾರದೆನ್ನುವ ಅಂತರಿಕ ನಿರ್ಬಂಧವನ್ನು ಜಾರಿಗೆ ತರಲಾಯಿತು.

ನಿರ್ಮಾಪಕರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಮೊದಲಬಾರಿಗೆ ಚಿತ್ರಗಳ ಶೀರ್ಷಿಕೆಗಳನ್ನು ಮಂಡಳಿಯಲ್ಲಿ ನೊಂದಾಯಿಸುವ ಕ್ರಮ ಹಾಗೂ ಹಂಚಿಕೆದಾರರ ಹಿತದೃಷ್ಟಿಯಿಂದ ವಿತರಕರು ತಾವು ವಿತರಣೆಗೆ ತೆಗೆದುಕೊಂಡ ಚಿತ್ರಗಳನ್ನು ಮಂಡಳಿಯಲ್ಲಿ ನೋಂದಣಿ ಮಾಡುವ ಕ್ರಮಗಳ ಪರಿಣಾಮ ತಮ್ಮ ತಮ್ಮ ಹಕ್ಕುಗಳ ಖಾತ್ರಿ ಒದಗಿತಲ್ಲದೇ ಸದಸ್ಯರಿಗೆ ತಮ್ಮ ಹಕ್ಕುಗಳ ಮೇಲಿನ ಸಂಪೂರ್ಣ ಸ್ವಾಮ್ಯತೆ ಲಭಿಸಿತು.

ವಲಯ ಸಮಿತಿಗಳಲ್ಲಿ ಚರ್ಚಿಸಿ, ಶಿಫಾರಸ್ಸು ಮಾಡಲಾದ ವಿಷಯಗಳನ್ನಷ್ಟೇ ಕಾರ್ಯಕಾರಿ ಸಮಿತಿ ಅನುಮೋದಿಸುವ ಪರಿಪಾಠದಿಂದ ತಳಮಟ್ಟದಲ್ಲಿಯೇ ಸಮಸ್ಯೆಯ ಸಂಪೂರ್ಣ ಅರಿವನ್ನು ಮನಗಾಣುವಲ್ಲಿ ಸಹಕಾರಿಯಾಯಿತು. ಇದೇ ವೇಳೆ ಮಂಡಳಿಯ ಸಂವಿಧಾನದಲ್ಲಿ ಮತ್ತೊಮ್ಮೆ ಮಾರ್ಪಾಟುಗಳಾಗಿ ಪ್ರತೀವಲಯಕ್ಕೂ ತನ್ನದೇ ಆದ ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಯ ಸ್ಥಾನವನ್ನು ನೀಡಿ ಆಯಾ ವಲಯದ ಸಂಪೂರ್ಣ ಜವಾಬ್ದಾರಿಗಳನ್ನು ಕೂಲಂಕುಶವಾಗಿ ಪರಾಮರ್ಶಿಸಿ ನಂತರ ಕೇಂದ್ರ ಮಂಡಳಿಯ ಮುಂದೆ ತರುವಂತಹ ವ್ಯವಸ್ಥೆಯ ಜೊತೆಗೆ ಕಾರ್ಯಕಾರಿ ಸಮಿತಿಯ ಸದಸ್ಯರುಗಳನ್ನು ಅಯಾ ವಲಯದ ಸದಸ್ಯರೇ ಆರಿಸುವಂತಹ ಚುನಾವಣಾ ನೀತಿಯನ್ನು ಜಾರಿಗೆ ತರಲಾಯಿತು. ಈ ಅವಧಿಯಲ್ಲಿ ಮಂಡಳಿಯ ಖ್ಯಾತಿ ಉತ್ತುಂಗ ಕ್ಕೇರಿತಲ್ಲದೆ ಅದರ ಕಾರ್ಯವ್ಯಾಪ್ತಿ ಮತ್ತು ಜವಾಬ್ದಾರಿಗಳು ವಿಸ್ತಾರ ವಾದವು. ಚುನಾವಣೆಯ ಸಂದರ್ಭದಲ್ಲಿ ಅರ್ಹವ್ಯಕ್ತಿಗಳನ್ನು ಹುಡುಕಿ ಅವರು ಹುದ್ದೆಯನ್ನು ಅಲಂಕರಿಸುವಂತೆ ಮಾಡುತ್ತಿದ್ದ ಪರಿಪಾಠ ತಪ್ಪಿ ಹಲವಾರು ಅರ್ಹ ಸದಸ್ಯರು ಮಂಡಳಿಯ ಆಡಳಿತದ ಚುಕ್ಕಾಣಿ ಹಿಡಿಯಲು ಅಸಕ್ತರಾದರು. ಮೂರು ವಲಯಗಳ ಸದಸ್ಯರ ಸಂಖ್ಯೆ ಮತ್ತು ಮಂಡಳಿಯ ಪ್ರಕ್ರಿಯೆಗಳಲ್ಲಿನ ಭಾಗವಹಿಸುವಿಕೆ ಹೆಚ್ಚಿದಂತೆಲ್ಲಾ ಮೂರುವಲಯಗಳಿಗೆ ಅಧ್ಯಕ್ಷಗಾದಿಯನ್ನು ಸಮಾನಾಂತರ ವಾಗಿ ದೊರಕಿಸುವ ಉದ್ದೇಶದಿಂದ ವಲಯಾವಾರು ಸರದಿಯ ಮೂಲಕ ಅಧ್ಯಕ್ಷರನ್ನು ಚುನಾಯಿಸುವ ನಿಯಮವನ್ನು ೧೯೮೨ರಲ್ಲಿ ಜಾರಿಗೆ ತರಲಾಯಿತು. ಕಾಲಬದ್ದವಾಗಿ – ಮಂಡಳಿಯ ಆದಾಯ, ನಿರ್ವಹಣಾ ವೆಚ್ಚ ಇವುಗಳ ಜೊತೆಗೆ ಪ್ರತಿಯೊಬ್ಬ ಅರ್ಹ ಸದಸ್ಯರಿಗೂ ಅಧಿಕಾರವನ್ನು ಒದಗಿಸಿಕೊಡುವ ಸದುದ್ದೇಶದಿಂದ ೨೦೦೯ರಂದು ನಡೆದ ವಿಶೇಷ ಸರ್ವಸದಸ್ಯರ ಸಭೆಯಲ್ಲಿ ಮಂಡಳಿಯ ನಿಯಮಾವಳಿಗಳಲ್ಲಿ ಮಾರ್ಪಾಡು ಮಾಡಿ ಈ ನಿಯಮಾವಳಿಗಳಲ್ಲಿ ಪ್ರಥಮ ಬಾರಿಗೆ ಸದಸ್ಯರ ಭವಿಷ್ಯನಿಧಿ, ಹಣಕಾಸಿನ ನೆರವು, ಮರಣ ನಿಧಿ ಮುಂತಾದ ವಿಷಯಗಳ ಬಗ್ಗೆ ಪ್ರಸ್ತಾಪಿಸಲಾಯಿತು. ಈ ಎಲ್ಲಾ ನಡಾವಳಿಗಳನ್ನು ಕಾಲದಿಂದ ಕಾಲಕ್ಕೆ ಮರ್ಪಾಡು ಮಾಡುವಲ್ಲಿ ಮಂಡಳಿಯ ಮಾಜಿ ಅಧ್ಯಕ್ಷರುಗಳಾದ ಭಕ್ತವತ್ಸಲ, ಕೆ.ವಿ. ಗುಪ್ತ, ಆರ್. ಲಕ್ಷ್ಮಣ್, ಕೆ.ವಿ. ಚಂದ್ರಶೇಖರ್, ಕೆ.ಸಿ.ಎನ್. ಚಂದ್ರಶೇಖರ್, ಸಿ.ವಿ.ಎಲ್. ಶಾಸ್ತ್ರಿ, ಎ.ಆರ್. ರಾಜುರವರ ಮಾರ್ಗದರ್ಶನ ಅಮೂಲ್ಯವಾದದ್ದು.

Karnataka film chamber of commerce

ಸ್ವಂತ ಕಚೇರಿ

೧೯೪೪ರಿಂದ ೧೯೭೭ರವರೆಗೆ ನಾಲ್ಕಾರು ಕಡೆ ಕಾರ್ಯನಿರ್ವಹಿಸಿದ ವಾಣಿಜ್ಯ ಮಂಡಳಿ ಅಂತಿಮವಾಗಿ ನೆಲೆನಿಂತದ್ದು ಕ್ರೆಸೆಂಟ್ ರಸ್ತೆಯ ಇಂದಿನ ಕಟ್ಟಡವಿರುವ ಜಾಗದಲ್ಲಿ ಮಾಜಿ ಅಧ್ಯಕ್ಷರುಗಳಾದ, ಎಂ. ಭಕ್ತವತ್ಸಲ, ಕೆ.ವಿ. ಗುಪ್ತ, ಎನ್. ವೀರಸ್ವಾಮಿ ಮತ್ತು ಅಂದಿನ ಆಡಳಿತ ಮಂಡಳಿಯಲ್ಲಿದ್ದ ಸದಸ್ಯರ ಕಠಿಣ ಪರಿಶ್ರಮದಿಂದ ಪ್ರದರ್ಶಿಸುವ ಪ್ರತಿ ಆಟದ ಒಂದು ರುಪಾಯಿಯ ದೇಣಿಗೆಯಿಂದ ಆರಂಭವಾದ ಈ ಅಭಿಯಾನ ಕೆಲವೇ ವರ್ಷಗಳಲ್ಲಿ ಒಂದು ಸುಸಜ್ಜಿತವಾದ ಕಟ್ಟಡವನ್ನು ಕಟ್ಟುವುದರ ಂದ ಜೊತೆಗೆ ಮಂಡಳಿಗೆ ಆರ್ಥಿಕ ಸುಭದ್ರತೆಯನ್ನು ಒದಗಿಸಿಕೊಟ್ಟಿತು. ಇದರಿಂದಾಗಿ ಕನ್ನಡ ಚಿತ್ರೋದ್ಯಮಕ್ಕೆ ಬಹಳಷ್ಟು ರೀತಿಯ ಸಹಕಾರಿಯಾಯಿತು.

೨೦೦೦ದ ಸಂವತ್ಸರ ದಿನಗಳಲ್ಲಿ ಮಂಡಳಿಯ ಬಹುತೇಕ ಸದಸ್ಯರಿಗೆ ಕಟ್ಟಡದ ಸುತ್ತಲೂ ಇರುವ ಖಾಲಿ ಜಾಗವನ್ನು ಉಪಯೋಗಿಸಿಕೊಂಡು ನಗೆ ಉದ್ಯಮಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಅಳವಡಿಸಿ ವೇ ಕೊಳ್ಳಲು ಅನುವಾಗುವಂತಹ ಸಂಕೀರ್ಣವನ್ನು ಕಟ್ಟುವ ಬಯಕೆ ಈ ಚಿಗುರೊಡೆದದ್ದು ಸಹಜ ಅಂದಿನ ಯುವ ಉತ್ಸಾಹಿ ಅಧ್ಯಕ್ಷರಾಗಿದ್ದ ಶ್ರೀಯುತ ಕೆ.ಸಿ.ಎನ್. ಚಂದ್ರಶೇಖರ್ ಹೊಸಕಟ್ಟಡದ ರೂಪುರೇಷೆಗಳನ್ನು ದು ಸಿದ್ಧಪಡಿಸಿದರಾದರೂ ಕಟ್ಟಡವನ್ನು ಕಟ್ಟುವ ಮೊದಲು ಕನಿಷ್ಠ ೨೫ ಭಾಗದ – ಹಣವನ್ನು ಕ್ರೋಢೀಕರಿಸಿದ ನಂತರವೇ ಪ್ರಸ್ತುತ ಕಟ್ಟಡವನ್ನು ಕೆಡವಬೇಕೆನ್ನುವ ಕೆಲವು ಹಿರಿಯರ ಅಭಿಪ್ರಾಯಕ್ಕೆ ಬೆಲೆಯಿತ್ತು. ಹಣವನ್ನು ಕ್ರೋಡೀಕರಿಸುವ ಪ್ರಕ್ರಿಯೆ ಆರಂಭಿಸಲಾಯಿತು. ಈ ಹಂತದಲ್ಲಿ ವಾಣಿಜ್ಯ ಮಂಡಳಿಯ ಬೆನ್ನಿಗೆ ನಿಂತವರು ಕನ್ನಡ ಚಲನಚಿತ್ರ ನಿರ್ಮಾಪಕರು ಮತ್ತು ಇತರಭಾಷಾ ಚಿತ್ರಗಳ ವಿತರಕರು. ವಾಣಿಜ್ಯ ಮಂಡಳಿಯ ಉಪಸಮಿತಿಯೊಂದು ರೂಪಿಸಿದ್ದ ಅಲಿಖಿತ ಯೋಜನೆಯಡಿ ಸತತವಾಗಿ ಮೂರರಿಂದ ನಾಲ್ಕು ವರ್ಷಗಳ ಕಾಲ ತಾವು ಬಿಡುಗಡೆಗೊಳಿಸುವ ಪ್ರತೀ ಚಿತ್ರದ ಮೇಲೆ ಇಂತಿಷ್ಟು ದೇಣಿಗೆಯನ್ನು ಪರಭಾಷಾ ಚಿತ್ರವಿತರಕರು ನೀಡಿದರಲ್ಲದೆ ಬಿಡುಗಡೆಗೊಳ್ಳುವ ಪ್ರತೀ ಕನ್ನಡ ಚಿತ್ರದ ವೇಳೆ ಕನ್ನಡ ನಿರ್ಮಾಪಕರು ಇಂತಿಷ್ಟು ಹಣವೆಂದು ನೀಡಿದ್ದು ಕಟ್ಟಡದ ಕನಸು ನನಸಾಗುವಲ್ಲಿ ಸಹಕಾರಿಯಾಯಿತು.

ಅಂತಿಮವಾಗಿ ಶ್ರೀಮಾನ್ ತಲ್ಲಂ ನಂಜುಂಡಶೆಟ್ಟರು ಅಧ್ಯಕ್ಷರಾಗಿದ್ದ ಸಮಯದಲ್ಲಿ ಕಟ್ಟಡದ ನೀಲಿ ನಕಾಶೆ ಸಿದ್ಧವಾಗಿ ಕಟ್ಟಡವನ್ನು ಕೆಡವಿ ಮಂಡಳಿಯ ಕಚೇರಿಯನ್ನು ವಿಜಯಾ ಪಿಕ್ಚರ್ಸ್ ಸರ್ಕ್ಯೂಟ್ ಚಿತ್ರ ಹಂಚಿಕಾ ಕಛೇರಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಯಿತು.

ಸಾಂದರ್ಭಿಕವಾದ ಕೆಲವು ಸಮಸ್ಯೆಗಳಿಂದಾಗಿ ತಲ್ಲಂರವರು ಅಧಿಕಾರದಿಂದ ಅನಿವಾರ್ಯವಾಗಿ ಹೊರಹೋದಾಗ ಕಟ್ಟಡ ಕೆಲಸವೂ ನೆನೆಗುದಿಗೆ ಬೀಳಬಹುದೆಂಬ ಭಯ ಸದಸ್ಯರನ್ನು ಅವರಿಸಿತು. ಅದೃಷ್ಟವಶಾತ್ ಹಾಗಾಗದೇ ಕಟ್ಟಡದ ಸಲುವಾಗಿಯೇ ರೂಪಿಸಿದ್ದ ಕಟ್ಟಡ ಉಸ್ತುವಾರಿಯ ಉಪಸಮಿತಿಯ ಕಾರ್ಯದಕ್ಷತೆ ಮತ್ತು ಆನಂತರ ಅಧ್ಯಕ್ಷರಾದ ಶ್ರೀಯುತ ಎಸ್. ರಮೇಶ್, ಹೆಚ್. ಡಿ. ಗಂಗರಾಜುರವರ ಮಾರ್ಗದರ್ಶನದಲ್ಲಿ ಕಟ್ಟಡ ಹಂತಹಂತವಾಗಿ ನಿರ್ಮಾಣಗೊಂಡಿತು. ಅಂತಿಮವಾಗಿ ಕಟ್ಟಡದ ಒಳಾಂಗಣದ ವಿನ್ಯಾಸ, ಅವರಣದ ವಿನ್ಯಾಸಗಳೆಲ್ಲ ಮತ್ತೆ ತಲ್ಲಂರವರ ಅಧ್ಯಕ್ಷತೆಯಲ್ಲೇ ಪೂರ್ಣಗೊಂಡದ್ದು ವಿಶೇಷ. ಈ ಸಮಯದಲ್ಲಿ ಮಂಡಳಿಯ ಅಧ್ಯಕ್ಷರ ಜೊತೆಯಲ್ಲಿ ಸಮರ್ಥವಾಗಿ ಹೆಗಲುಕೊಟ್ಟ, ಆಡಳಿತಮಂಡಳಿ ಮತ್ತು ಕಾರ್ಯಕಾರಿ ಸಮಿತಿ ಮತ್ತು ಉಪಸಮಿತಿಗಳ ಸದಸ್ಯರ ಪರಿಶ್ರಮ ಅಭಿನಂದನಾರ್ಹ.

ಆನಂತರ ಮಂಡಳಿಯ ಆಡಳಿತಕ್ಕೆ ಚುನಾಯಿತರಾದ ವಾಣಿಜ್ಯ ಮಂಡಳಿಯ ಪ್ರಥಮ ಮಹಿಳಾ ಅಧ್ಯಕ್ಷರಾದ ಡಾ. ಜಯಮಾಲ ಮತ್ತು ಅವರ ತಂಡ ಅನಿರೀಕ್ಷಿತವಾಗಿ ಚಿತ್ರರಂಗಕ್ಕೆ ದಾಳಿಯಿಟ್ಟ ಹೊಸ ಪ್ರಭಾವೀ ಉದ್ಯಮಿಗಳ ನೆರವಿನಿಂದ ಕಟ್ಟಡದ ಸಲುವಾಗಿ ಪಡೆದಿದ್ದ ಬ್ಯಾಂಕ್ ಸಾಲವನ್ನು ಸಂಪೂರ್ಣವಾಗಿ ತೀರಿಸಿದ್ದಲ್ಲದೆ ಈಗ ಬರುತ್ತಿರುವ ವಾರ್ಷಿಕ ಆದಾಯವನ್ನು ಸದುದ್ದೇಶಕ್ಕಾಗಿ ಬಳಸಲು ಅನುವಾಗುವಂತೆ ಟ್ರಸ್ಟ್ ಒಂದನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ.

ಒಟ್ಟಾರೆ ೧೪೪೪ರಲ್ಲಿ ಸ್ಥಾಪಕ ಸದಸ್ಯರ ಮನೆಯೊಂದರಲ್ಲಿ ಕಾರ್ಯ ಚಟುವಟಿಕೆ ಆರಂಭಿಸಿದ ವಾಣಿಜ್ಯ ಮಂಡಳಿ ೨೦೧೦ರ ಹೊತ್ತಿಗೆ ತನ್ನ ಅಂಗ ಸಂಸ್ಥೆಗಳಿಗೆ ಧನಸಹಾಯ ಮಾಡುವಷ್ಟರ ಮಟ್ಟಿಗೆ ಹೆಮ್ಮರವಾಗಿ ಬೆಳೆದಿರುವುದು ಹೆಮ್ಮೆಯ ವಿಚಾರ.

ಸ್ವನಿಯಂತ್ರಣ ವ್ಯವಸ್ಥೆ

ಚಲನಚಿತ್ರೋದ್ಯಮ ಒಂದು ಅಸ್ಥಿರತೆಯ ಉದ್ಯಮ. ಪ್ರಪಂಚ ದಾದ್ಯಂತ ಹಲವಾರು ಭಾಷೆಗಳಲ್ಲಿ ತಯಾರಾಗುವ ಸಾವಿರಾರು ಚಿತ್ರಗಳಲ್ಲಿ ಗೆಲುವಿನ ನಗೆಬೀರುವ ಚಿತ್ರಗಳು ಶೇ. ೧೦ರಿಂದ ೧೫ ಮಾತ್ರ. ಇಂತಹ ಮಾಯಾಜಿಂಕೆಯ ಬೆನ್ನೇರಿ ಬಸವಳಿಯುವ ಹೂಡಿಕೆದಾರರಲ್ಲಿ ಸಮಸ್ಯೆಗಳು, ಅತೃಪ್ತಿಗಳು, ವಿರಸಗಳು ಸಹಜ, ಕರ್ನಾಟಕದ ಮಟ್ಟಿಗೆ. ಈ ಸಮಸ್ಯೆ ಇನ್ನಷ್ಟು ಜಟಿಲ. ಇಲ್ಲಿ ಕನ್ನಡ ಚಿತ್ರಗಳ ಮೇಲೆ ಹೂಡುವ ಬಂಡವಾಳದಷ್ಟೇ ಹಣವನ್ನು ಇತರ ಭಾಷಾ ಚಿತ್ರಗಳಲ್ಲಿ ಹೂಡುವ ಹಂಚಿಕೆದಾರರೂ ಸಹ ಮಂಡಳಿಯ ಸದಸ್ಯರಾಗಿರುವುದರಿಂದ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಧಕ್ಕೆಬಾರದ ರೀತಿಯಲ್ಲಿ ಅನ್ಯಭಾಷಾ ಚಿತ್ರಗಳನ್ನು ನಿಯಂತ್ರಿಸಿಕೊಂಡು ಸದಸ್ಯರ ಹಿತ ಕಾಪಾಡುವುದು ಮಂಡಳಿಗೆ ನಿಜವಾದ ಸವಾಲು. ಒಂದು ವಲಯದ ಸದಸ್ಯರು ಇನ್ನೊಂದು ವಲಯದ ಮೇಲೆ ಅವಲಂಬಿತ ವಾಗಬೇಕಾದ ಅನಿವಾರ್ಯತೆ ಕರ್ನಾಟಕದ ಮಟ್ಟಿಗೆ ಸತ್ಯ.

ಚಾರಿತ್ರಿಕವಾಗಿ ಕನ್ನಡೇತರ ಚಿತ್ರಗಳನ್ನು ಕನ್ನಡ ಚಿತ್ರಗಳಷ್ಟೇ ಪ್ರೀತಿಯಿಂದ ಪೋಷಿಸಿಕೊಂಡು ಬಂದಿರುವ ಕರ್ನಾಟಕದ ಪ್ರೇಕ್ಷಕ ನಾಡು-ನುಡಿಯ ವಿಚಾರದಲ್ಲಿ ವಿವಾದಗಳಿದ್ದಾಗ ತಾತ್ಕಾಲಿಕವಾಗಿ ಇತರ ಭಾಷಾ ಚಿತ್ರಗಳೆಡೆ ಕೆಂಗಣ್ಣು ಬೀರುವುದು, ಕನ್ನಡ ಚಿತ್ರಗಳಿಗೆ ಸೂಕ್ತ ಚಿತ್ರಮಂದಿರ ಸಿಗದಿದ್ದಾಗ ಕನ್ನಡ ನಿರ್ಮಾಪಕರು ಸಿಡಿದೇಳುವುದು ಸಹಜವಾಗಿದ್ದು ಇತ್ತೀಚಿನ ದಿನಗಳಲ್ಲಿ ಅತ್ಯಂತ ನವಿರಾಗಿ ಸಮಸ್ಯೆಗಳನ್ನು ಬಿಡಿಸಿ ಸದಸ್ಯರ ಹಿತ ಕಾಪಾಡುವಲ್ಲಿ ಮಂಡಳಿ ಸಫಲವಾಗಿದೆ.

೧೯೭೩ರಿಂದಲೂ ಮಂಡಳಿಯಲ್ಲಿ ಜಾರಿಯಲ್ಲಿರುವ ಪಂಚಾಯಿತಿ ವ್ಯವಸ್ಥೆ (ಈಶ್ವಔಛಔಒಂಡಔಈಖ ಈಒಟಕ) ಸದಸ್ಯರ ನಡುವಿನ ವ್ಯಾಜ್ಯಗಳನ್ನು ತೀರ್ಮಾನಿಸುವಲ್ಲಿ ಸಹಕಾರಿಯಾಗಿದೆ. ಇದೊಂದು ಮಾದರಿಯ ವ್ಯವಸ್ಥೆಯಾಗಿದ್ದು, ನೂರಾರು ಪ್ರಕರಣಗಳು ಕೋರ್ಟಿನ ಕಟಕಟೆಯನ್ನು ತುಳಿಯದೇ ಇತ್ಯರ್ಥವಾಗಿದೆ.

ಇತ್ತೀಚೆಗೆ ಈ ಬೋರ್ಡುಗಳ ಸ್ವರೂಪ ಬದಲಾಗಿದ್ದು ‘ಆರ್ಬಿಟರೇಶನ್ ಬೋರ್ಡ್’ ಆಗಿ ಬದಲಾದದ್ದು ಕಾನೂನಿನ ಚೌಕಟ್ಟಿನಲ್ಲಿ ಈ ವ್ಯವಸ್ಥೆಗೆ ಮತ್ತಷ್ಟು ಬಲಬಂದಂತಾಗಿದೆ.

ವಾರ್ಷಿಕವಾಗಿ ೪೦ರಿಂದ ೫೦ರಷ್ಟು ಪ್ರಕರಣಗಳನ್ನು ಇತ್ಯರ್ಥ ಗೊಳಿಸುವ ಈ ಆರ್ಬಿಟರೇಷನ್ ಬೋರ್ಡ್‌ನಲ್ಲಿ ತೀರ್ಮಾನವಾದ, ತೀರ್ಮಾನಗಳ ವಿರುದ್ಧವಾಗಿ ಕೋರ್ಟು ಮೊರೆಹೋದ ಪ್ರಕರಣಗಳಲ್ಲಿ ಶೇ. ೯೯ ತೀರ್ಪುಗಳಲ್ಲಿ ಘನ ನ್ಯಾಯಾಲಯವು ಮಂಡಳಿಯ ತೀರ್ಮಾನಗಳನ್ನೇ ಎತ್ತಿಹಿಡಿದಿರುವುದು ಸಮಿತಿಯ ನಿಖರತೆಗೆ ಸಾಕ್ಷಿ.

ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಫಿಲಂ ಫೆಡರೇಷನ್ ಆಫ್ ಇಂಡಿಯಾದೊಂದಿಗೆ ಆದಿಯಿಂದಲೂ ನಿಕಟವಾದ ಸಂಬಂಧವನ್ನು ಹೊಂದಿರುವ ಮಂಡಳಿ, ಅಂತರರಾಜ್ಯ ಸಮಸ್ಯೆಗಳನ್ನು ಬಿಡಿಸುವಲ್ಲಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಸಹಕರಿಸುವ ಬಂದಿದೆ.

ಹೋರಾಟಗಳು ಮತ್ತು ವಾಣಿಜ್ಯ ಮಂಡಳಿ

ನಾಡು ನುಡಿಯ ಪ್ರಶ್ನೆ ಬಂದಾಗಲೆಲ್ಲಾ ವಾಣಿಜ್ಯ ಮಂಡಳಿ ಕನ್ನಡ ಪರವಾದ ನಿಲುವುಗಳಿಗೆ ಬದ್ಧವಾಗಿದೆ . ಅರವತ್ತರ ದಶಕದಲ್ಲಿ, ಡಬ್ಬಿಂಗ್ ಚಿತ್ರಗಳ ವಿರುದ್ಧ ನಡೆದ ಹೋರಾಟದಲ್ಲಿ ಸಾಹಿತ್ಯ ದಿಗ್ಗಜರನ್ನು ಬೆಂಬಲಿಸುವ ನಿಲುವು ತೆಗೆದುಕೊಂಡಿತಲ್ಲದೇ, ೯೦ರ ದಶಕದಲ್ಲಿ ಮಹಾಧಾರವಾಹಿಗಳಾದ ‘ರಾಮಾಯಣ’ ಮತ್ತು ‘ಸೋರ್ಡ್ ಆಫ್ ಟಿಪ್ಪು ಸುಲ್ತಾನ್’ ಕನ್ನಡಕ್ಕೆ ಡಬ್ ಮಾಡುವ ಪ್ರಯತ್ನ ನಡೆದಾಗ ಮಂಡಳಿ ಡಾ. ರಾಜಕುಮಾರ್‌ರವರ ಮುಂದಾಳತ್ವದಲ್ಲಿ ಆ ಪ್ರಯತ್ನಗಳನ್ನು ಕೊ ತಡೆಯುವಲ್ಲಿ ಯಶಸ್ವಿಯಾಯಿತು. ೨೦೦೫-೨೦೦೬ರಲ್ಲಿ ಒಳದಾರಿಗಳಿಂದ ಡಬ್ಬಿಂಗ್ ಸಂಸ್ಕೃತಿಯನ್ನು ಹೇರಲು ಹವಣಿಸಿದ ಕೆಲವು ಚಿತ್ರಗಳನ್ನು ಸರ್ಕಾರದ ಗಮನ ಸೆಳೆಯುವ ಮೂಲಕ ನಿರ್ಬಂಧಿಸಿತು.

ಉತ್ತರ ಭಾರತೀಯ ಚಿತ್ರಗಳು ಬಹುತೇಕ ಮುಂಬೈನಲ್ಲಿ ಹಾಗೂ ದಕ್ಷಿಣದ ಚಿತ್ರಗಳು ಮದ್ರಾಸ್‌ನಲ್ಲಿ ಸೆನ್ಸಾರ್ ಆಗುತ್ತಿದ್ದ ಕಾಲವದು. ಅಂದಿಗೆ ಸರಿ ಸುಮಾರು ೫೦ರಿಂದ ೬೦ರಷ್ಟು ಚಿತ್ರಗಳನ್ನು ತಯಾರಿಸುವ ಮಟ್ಟಕ್ಕೇರಿದ ಕನ್ನಡ ಚಿತ್ರ ನಿರ್ಮಾಪಕರ ಬವಣೆಯನ್ನು ಮನಗಂಡ ವಾಣಿಜ್ಯ ಮಂಡಳಿ ತನ್ನ ಸದಸ್ಯರ ಆಧಿಕ ಪ್ರಮಾಣದ ಹಣವನ್ನು ವ್ಯಯಿಸಿಕೊಂಡು ಮದ್ರಾಸ್‌ಗೆ ಹೋಗುವುದನ್ನು ತಪ್ಪಿಸಲು ಬೆಂಗಳೂರು ನಗರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯನ್ನು ದೊರಕಿಸಲು ಕೇಂದ್ರ ಸರ್ಕಾರದ ಮೊರೆಹೋಯಿತು. ಅದನ್ನು ಪಡೆಯುವ ನಿಟ್ಟಿನಲ್ಲಿ ಹಲವಾರು ವರ್ಷಗಳ ಹೋರಾಟವನ್ನೇ ಮಾಡಬೇಕಾಯಿತು. ಅಂತಿಮವಾಗಿ ಕರ್ನಾಟಕದ ಸಂಸದರ ನೆರವಿನೊಂದಿಗೆ ಸಂಸತ್ತಿನ ವರೆವಿಗೂ ಮನವಿಯನ್ನು ಕೊಂಡೊಯ್ಯಲಾಗಿ ೧೯೮೩ರಲ್ಲಿ ಬೆಂಗಳೂರಿನಲ್ಲಿ ಪ್ರಾದೇಶಿಕ ಸೆನ್ಸಾರ್ ಮಂಡಳಿಯ ಕಛೇರಿ ಆರಂಭವಾಯಿತು. ಕನ್ನಡ ಚಿತ್ರ ನಿರ್ಮಾಪಕರ ಬಹುದಿನದ ಕನಸು ಕನಸಾಯಿತು.

೧೯೯೦ರಲ್ಲಿ ಮಿತಿಮೀರಿದ ಅಶ್ಲೀಲ ಭಿತ್ತಿಪತ್ರಗಳನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಚಲನಚಿತ್ರಗಳ ಭಿತ್ತಿಪತ್ರದ ಸೆನ್ಸಾರ್‌ಗೆ ಮುಂದಾದಾಗ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವಾಣಿಜ್ಯ ಮಂಡಳಿ ಈ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡು ಸಮಾಜದ ಸ್ವಾಸ್ಥ್ಯ ಕಾಪಾಡುವ ಭರವಸೆಯನ್ನು ಸರ್ಕಾರಕ್ಕೆ ನೀಡಿ ಅದರಂತೆಯೇ ಉಪಸಮಿತಿಯೊಂದನ್ನು ರಚಿಸಿ ಭಿತ್ತಿಪತ್ರಗಳನ್ನು ಪರಿಶೀಲಿಸಿ ಪ್ರಮಾಣಪತ್ರವನ್ನು ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿತು. ಈ ವ್ಯವಸ್ಥೆ ಇಂದಿಗೂ ಚಾಲ್ತಿಯಲ್ಲಿದ್ದು ವಾಣಿಜ್ಯಮಂಡಳಿಯಿಂದ ಜಾಹಿರಾತು ಪ್ರಮಾಣಪತ್ರವನ್ನು ಪಡೆದ ನಂತರವೇ ಸೆನ್ಸಾರ್ ಮಂಡಳಿ ಚಿತ್ರಗಳನ್ನು ಪರಿವೀಕ್ಷಣೆಗೆ ಅನುಮತಿ ನೀಡುತ್ತಿದೆ.

ಸಮಾಜಮುಖಿಯಾಗಿ ವಾಣಿಜ್ಯ ಮಂಡಳಿ

ಚಲನಚಿತ್ರ ವಾಣಿಜ್ಯ ಮಂಡಳಿ, ಕೇವಲ ತನ್ನ ಸದಸ್ಯರ ಹಿತ ಕಾಪಾಡುವುದಷ್ಟೇ ಅಲ್ಲ, ತಾನ್ನಾಡಿನ ಯಾವುದೇ ಭಾಗದಲ್ಲಿ ಪ್ರಕೃತಿ ವಿಕೋಪಗಳಾದಾಗ ತನ್ನ ಸಹಾಯಹಸ್ತವನ್ನು ಚಾಚಿದೆ. ಪ್ರಚಂಡ, ಚಂಡಮಾರುತದಿಂದ ಅಂಧ್ರರಾಜ್ಯ ತತ್ತರಿಸಿ. ಹೋದಾಗ ಎರಡು ರಾಜ್ಯಗಳ ಚಿತ್ರಕಲಾವಿದರೆ ಕ್ರಿಕೆಟ್ ಆಟವನ್ನೂ ಪ್ರಾಯೋಜಿಸಿ ಆಂಧ್ರ ಸರ್ಕಾರಕ್ಕೆ ತನ್ನ : ದೇಣಿಗೆಯನ್ನು ನೀಡಿದ್ದು, ಸುನಾಮಿಗೆ ಸಿಕ್ಕಿ ನರಳಿದ ತಮಿಳುನಾಡಿನ, ಕರಾವಳಿ ಭಾಗದ ಜನರಿಗೆ ಅಗತ್ಯ ಪರಿಕರಗಳನ್ನು ದವಸಧಾನ್ಯಗಳನ್ನು : ರವಾನಿಸಿದ್ದು, ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರಯೋಧರ ಕುಟುಂಬಗಳಿಗೆ ರೂ. ೪೦ ಲಕ್ಷಕ್ಕೂ ಹೆಚ್ಚು ಹಣವನ್ನು ಕ್ರೋಢೀಕರಿಸಿ 1 ಕೊಟ್ಟಿದ್ದು, ಇತ್ತೀಚೆಗೆ ಸಂಕಷ್ಟಕ್ಕೀಡಾದ ನೆರೆ ಸಂತ್ರಸ್ತರಿಗಾಗಿ ೬೦ ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ಸಂಗ್ರಹಿಸಿಕೊಟ್ಟಿದ್ದು-ಕೆಲವು : ಉದಾಹರಣೆಗಳು. ಇಂತಹ ಸಂದರ್ಭಗಳಲ್ಲಿ ಮಂಡಳಿಯ ಬೆನ್ನಿಗೆ ನಿಂತು ಚೈತನ್ಯ ತುಂಬುತ್ತಿದ್ದ ಮಹಾನ್ ಚೇತನ ಡಾ. ರಾಜಕುಮಾರ್ ರವರು, ಮಂಡಳಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಡಾ. ರಾಜ್ ಚಿತ್ರೋದ್ಯಮದ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು ಮತ್ತು ಪ್ರಕೃತಿ ವಿಕೋಪದಿಂದ ನೊಂದ ನಾಡಿನ ಜನತೆಗೆ ಸಹಾಯ ಹಸ್ತ ನೀಡುವಲ್ಲಿ ಮಂಡಳಿ ಆಯೋಜಿಸುತ್ತಿದ್ದ ಯಾವುದೇ ಕಾರ್ಯಕ್ರಮಕ್ಕೆ ಪ್ರಮುಖರಾಗಿ ನಿಲ್ಲುತ್ತಿದ್ದರು. ಅಂತೆಯೇ ಡಾ. ರಾಜಕುಮಾರ್ ಅವರ ನೇತೃತ್ವದ ಹೋರಾಟಗಳಲ್ಲಿ ಕನ್ನಡ ಚಲನಚಿತ್ರ ಕಲಾವಿದರೆಲ್ಲರೂ ಭಾಗವಹಿಸಿ ನೀಡಿದ ಸಹಕಾರ ಅಭೂತಪೂರ್ವವಾದುದು.

ಚಲನಚಿತ್ರ ಕಾರ್ಮಿಕರ ಒಕ್ಕೂಟ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಸಂಬಂಧ ಸದಾ ಮಧುರವಾಗಿದ್ದು ಪರಸ್ಪರ ಸಹಕಾರವಿರುವುದನ್ನು ಇಲ್ಲಿ ಸ್ಮರಿಸಬೇಕು. ಡಾ. ರಾಜ್ ಅವರನ್ನು ವೀರಪ್ಪನ್ ಅಪಹರಿಸಿದ ಸಂದರ್ಭದಲ್ಲಿ ವಾಣಿಜ್ಯ ಮಂಡಳಿಯ ಆಶಯದಂತೆ ಕಾರ್ಮಿಕರನ್ನೂ ಒಳಗೊಂಡಂತೆ ಇಡೀ ಚಿತ್ರರಂಗವು ಕಾರ್ಯಸ್ಥಗಿತಗೊಳಿಸಿ ಒಗ್ಗಟ್ಟು ಪ್ರದರ್ಶಿಸಿ ನೈತಿಕತೆ ಮೆರೆದದ್ದು ಸದಾ ಉಲ್ಲೇಖನೀಯ. ಅಂತೆಯೇ ವಾಣಿಜ್ಯ ಮಂಡಳಿಯೂ ಚಿತ್ರರಂಗದ ಎಲ್ಲ ವಲಯಕ್ಕೂ ಸ್ಪಂದಿಸುತ್ತಾ ಬಂದಿದೆ.

ಇತ್ತೀಚೆಗೆ, ಬೆಂಗಳೂರು ನಗರದ ಗೋಡೆಗಳ ಮೇಲೆ ಚಲನ ಚಿತ್ರದ ಪೋಸ್ಟರ್‌ಗಳನ್ನು ಅಂಟಿಸಬಾರದೆಂದು ಮಹಾನಗರ ಪಾಲಿಕೆಯು ನಿರ್ಧರಿಸಿದಾಗ ಮಂಡಳಿಯು ಮಧ್ಯಪ್ರವೇಶಿಸಿ ಹೊರವಲಯದಲ್ಲಿ ಪೋಸ್ಟರ್ ಅಂಟಿಸಲು ಅವಕಾಶ ಕಲ್ಪಿಸಿತು. ಜೊತೆಗೆ ೨೫೦ರಷ್ಟು ಹೋಲ್ಡರ್‌ಗಳನ್ನು ಹಾಕಲು ಅನುಮತಿ ಕೊಡುವಂತೆ ಮಾಡಿತು. ಇದರಿಂದ ನಿರ್ಮಾಪಕರು, ವಿತರಕರಿಗಲ್ಲದೆ ಕಾರ್ಮಿಕರಿಗೂ ಅನುಕೂಲವಾಯಿತು. ಈ ಕೆಲಸ ಮಾಡುತ್ತಿದ್ದವರ ಕೈ ಹಿಡಿದಂತಾಯಿತು. ಈ ವಿಷಯದಲ್ಲಿ ಅಧ್ಯಕ್ಷೆ ಡಾ.ಜಯಮಾಲ ಅವರು ವಹಿಸಿದ ಆಸಕ್ತಿ ಅಭಿನಂದನೀಯವಾದುದು.

ಸರ್ಕಾರ ಮತ್ತು ವಾಣಿಜ್ಯಮಂಡಳಿ

ಆರಂಭದಿಂದಲೂ ರಾಜ್ಯ ಸರ್ಕಾರ ಮತ್ತು ವಾಣಿಜ್ಯ ಮಂಡಳಿಯ ಸಂಬಂಧ ಬಹುತೇಕ ಸೌಹಾರ್ದಯುತವಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ವಿಶೇಷವಾಗಿ ತೆರಿಗೆಗೆ ಸಂಬಂಧಿಸಿದ ಮತ್ತು ಕೇಬಲ್ ಮತ್ತು ವಿಡಿಯೋ ಪೈರಸಿಗಳಿಗೆ ಸಂಬಂಧಿಸಿದ ವಿಷಯಗಳಾಗಿ ಸರ್ಕಾರದೊಂದಿಗೆ ಬೀದಿಗಿಳಿದು ಹೋರಾಟ ನಡೆಸಿದ ಕೆಲವೇ ಕೆಲವು ನಿದರ್ಶನಗಳನ್ನು ಹೊರತುವಡಿಸಿದಲ್ಲಿ ವಾಣಿಜ್ಯಮಂಡಳಿ ಪಕ್ಷಾತೀತವಾಗಿ ರಾಜ್ಯ ಸರ್ಕಾರಗಳೊಂದಿಗೆ ಮಧುರವಾದ ಸಂಬಂಧವನ್ನು ಉಳಿಸಿಕೊಂಡು ಬಂದಿದೆ.

೧೯೮೭ಕ್ಕೂ ಮೊದಲು ಸಂಚಾರಿ ಚಿತ್ರಮಂದಿರಗಳು ೬ ತಿಂಗಳುಗಳಿಗೂ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಇರಬಾರದೆಂಬ ಕಾನೂನನ್ನು ಒಂದೇ ಜಾಗದಲ್ಲಿ ಬೇರೂರಿದ್ದ ಹೆಸರಿಗೆ ಮಾತ್ರ ಸಂಚಾರಿ ಚಿತ್ರಮಂದಿರಗಳೆಂದು ಹಣೆಪಟ್ಟಿ ಹೊತ್ತಿದ್ದ ನೂರಾರು ಚಿತ್ರಮಂದಿರಗಳನ್ನು ‘ಅರೆಖಾಯಂ ಚಿತ್ರಮಂದಿರಗಳು’ ಎನ್ನುವ ಹೆಸರಿನಡಿ ನಿಂತಲ್ಲೇ ನೆಲೆನಿಲ್ಲುವಂತೆ ಮಾಡಲು ಸರ್ಕಾರದ ಮನವೊಲಿಸಿದ ವಾಣಿಜ್ಯ ಮಂಡಳಿ ಅನಂತರ ಈ ಅರೆಖಾಯಂ ಚಿತ್ರಮಂದಿರಗಳನ್ನು ಖಾಯಂ ಚಿತ್ರಮಂದಿರಗಳನ್ನಾಗಿ ಪರಿವರ್ತಿಸಲು ನೀಡಿದ್ದ ಗಡುವನ್ನು ಕಾಲದಿಂದ ಕಾಲಕ್ಕೆ ಮುಂದೂಡು ವಲ್ಲಿಯೂ ಯಶಸ್ವಿಯಾಯಿತು. ಇದರಿಂದಾಗಿ ಈ ಅರೆಖಾಯಂ ಚಿತ್ರಮಂದಿರಗಳ ಮಾಲಿಕರಿಗೆ ಸಾಕಷ್ಟು ಸಮಯಾವಕಾಶ ದೊರೆತು ಈ ಚಿತ್ರಮಂದಿರಗಳು ಇಂದು ಸುಸಜ್ಜಿತ ಚಿತ್ರಮಂದಿರಗಳಾಗುವಲ್ಲಿ ಸಫಲವಾಗಿದೆ.

೧೯೯೦ರಲ್ಲಿ ನಾಯಿಕೊಡೆಗಳಂತೆ ತಲೆಯೆತ್ತಿದ ವಿಡಿಯೋ ಪಾಲ್ರ೯ಗಳು ಮತ್ತು ಕೇಬಲ್ ಚಾನಲ್‌ಗಳಿಂದ ಚಿತ್ರಮಂದಿರಗಳ ಗಳಿಕೆ ದಿಡೀರ್ ಕುಸಿತಗೊಂಡಾಗ ಸರ್ಕಾರಕ್ಕೆ ಪರಿಸ್ಥಿತಿಯ ಅರಿವು ಮೂಡಿಸಿದ ವಾಣಿಜ್ಯ ಮಂಡಳಿ ಸರ್ಕಾರ ವಿಡಿಯೋ ಚಿತ್ರಮಂದಿರ ಮತ್ತು ಕೇಬಲ್ ಟಿವಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕಾನೂನು ರೂಪಿಸಿ ಅವುಗಳ ಮೇಲೆ ತೆರಿಗೆ ಹಾಕಲಾಯಿತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬಾರದೆ ಸೋರಿಹೋಗುತ್ತಿದ್ದ ತೆರಿಗೆ ಸರ್ಕಾರಕ್ಕೆ ಸಲ್ಲುವಂತಾಯಿತು. ಆದರೂ ವಿಡಿಯೋ ಚಿತ್ರಮಂದಿರಗಳು ಮತ್ತು ಕೇಬಲ್ ಟಿವಿಯಲ್ಲಿ ಅನಧಿಕೃತವಾಗಿ ಚಿತ್ರಪ್ರದರ್ಶನ ನಡೆಯುತ್ತಿದ್ದು ವಾಣಿಜ್ಯಮಂಡಳಿ, ನಮ್ಮ ದೇಶದಲ್ಲಿ ವಿಡಿಯೋ ಚಿತ್ರಗಳಿಗಾಗಿಯೇ ಚಿತ್ರಗಳು ತಯಾರಾಗುತ್ತಿಲ್ಲವಾದ್ದರಿಂದ ಈ ಚಿತ್ರಮಂದಿರಗಳನ್ನು ಮುಚ್ಚಬೇಕೆಂದು ಬೇಡಿಕೆಯನ್ನಿಟ್ಟಿದ್ದು ಸರ್ಕಾರ ಇದನ್ನು ಸಹ ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುತ್ತಿದೆ.

೯೦ರ ದಶಕದ ನಂತರ ಹೆಚ್ಚಿದ ಖಾಸಗಿ ಚಾನಲ್‌ಗಳ ಭರಾಟೆಯಲ್ಲಿ, ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕುಸಿದಾಗ ಪ್ರದರ್ಶಕರಿಗೆ ಉತ್ತೇಜನ ನೀಡುವ ಸಲುವಾಗಿ ಪ್ರತಿ ಟಿಕೆಟ್ ಮೇಲೆ ಸೇವಾಶುಲ್ಕವನ್ನು ನೀಡಲು ಸರ್ಕಾರಕ್ಕೆ ವಿನಂತಿಸಿತು. ಈ ಸೇವಾಶುಲ್ಕವನ್ನು ತದನಂತರ ರೂ. ೨/- ಮತ್ತು ೧/- ರೂಗೆ ಹೆಚ್ಚಿಸಿದ ಸಂದರ್ಭದಲ್ಲಿ ಉದ್ಯಮದಲ್ಲಿ ಉಂಟಾದ ತೀವ್ರತರವಾದ ಭಿನ್ನಾಭಿಪ್ರಾಯಗಳು ಮಂಡಳಿಗೆ ನಿಜವಾದ ಸವಾಲಾಗಿ ಪರಿಣಮಿಸಿದವು. ಹಲವಾರು ತಿಂಗಳುಗಳ ಸತತ ಪರಿಶ್ರಮದಿಂದ ಅಂದಿನ ಆಡಳಿತಮಂಡಳಿಯ ಸದಸ್ಯರು ಮತ್ತು ಚಿತ್ರೋದ್ಯಮದ ಹಿರಿಯರು ಕೊನೆಗೂ ಮೂರು ವಲಯಗಳ ಸದಸ್ಯರನ್ನು ಒಂದುಗೂಡಿಸಿ ಒಗ್ಗಟ್ಟಿನ ಲಾಂಛನವನ್ನು ಸರ್ಕಾರದ ಮುಂದೆ ಪ್ರದರ್ಶಿಸಿದಾಗ ಈ ಸೇವಾಶುಲ್ಕವನ್ನು ಪ್ರದರ್ಶಕರು ಪಡೆಯಲು ಸರ್ಕಾರ ಅನುಮತಿ ನೀಡಿತು. ಇದರ ಪರಿಣಾಮ ಮುಳುಗುತ್ತಿದ್ದ ನಾವೆಯಂತಿದ್ದ ಅನೇಕ ಚಿತ್ರಮಂದಿರಗಳು ಇನ್ನಷ್ಟು ದಿನ ಸುಲಲಿತವಾಗಿ ತೇಲುವಂತಾಯಿತು.

ಕನ್ನಡ ಚಲನಚಿತ್ರಗಳಿಗೆ ಘನ ಸರ್ಕಾರ ಸಹಾಯಧನ ನೀಡಲಾರಂಭಿಸಿದ ಕಾಲದಿಂದ ಚಿತ್ರಗಳ ಸಂಖ್ಯೆ ಹೆಚ್ಚಿದಂತೆಲ್ಲಾ ಹೆಚ್ಚು ಹೆಚ್ಚು ಚಿತ್ರಗಳಿಗೆ ಸಹಾಯಧನವನ್ನು ದೊರಕಿಸಿಕೊಡುವಲ್ಲಿ ವಾಣಿಜ್ಯ ಮಂಡಳಿ ಅತಿಹೆಚ್ಚು ಬಾರಿ ಸರ್ಕಾರಕ್ಕೆ ಸಹಾಯ ಹಸ್ತ ಚಾಚಿದೆ. ಇದರ ಪರಿಣಾಮತೆ ಇತ್ತೀಚಿನವರೆಗೂ ಕೇವಲ ೩೦ ಉತ್ತಮ ಅಭಿರುಚಿಯ ಚಿತ್ರಗಳಿಗೆ ನೀಡುತ್ತಿದ್ದ ಸಹಾಯಧನವನ್ನು ಈ ವರ್ಷದಿಂದ ೫೦ ಚಿತ್ರಗಳಿಗೆ ಹೆಚ್ಚಿಸಿದೆಯಲ್ಲದೆ, ೨ ಮಕ್ಕಳ ಚಿತ್ರಗಳಿಗೆ ಮತ್ತು ನಮ್ಮ ನಾಡಿನ ಪ್ರವಾಸೋದ್ಯಮವನ್ನು, ಸಂಸ್ಕೃತಿಯನ್ನು ಬಿಂಬಿಸುವ, ಐತಿಹಾಸಿಕ ಚಿತ್ರಗಳಿಗೆ ತಲಾ ಒಂದು ಚಿತ್ರಕ್ಕೆ ಹೆಚ್ಚುವರಿಯಾಗಿ ರೂ. ೧೫ ಲಕ್ಷವನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ.

ಸರ್ಕಾರ ಕನ್ನಡ ಚಿತ್ರಗಳಿಗೆ ನೀಡುತ್ತಿದ್ದ ರೂ. ೫೦/-ರ ಮನರಂಜನಾ ತೆರಿಗೆ ವಿನಾಯಿತಿಯ ಬದಲು ಶೇ. ೧೦೦ ವಿನಾಯಿತಿ ನೀಡಿತಲ್ಲದೆ ೨೦೦೮ರವರೆಗೂ ಸ್ವಮೇಕ್ ಚಿತ್ರಗಳಿಗಷ್ಟೇ ನೀಡುತ್ತಿದ್ದ ವಿನಾಯತಿ ೨೦೦೯ರ ವಾರ್ಷಿಕ ವರ್ಷದಿಂದ ರಿಮೇಕ್ ಚಿತ್ರಗಳಿಗೂ ವಿಸ್ತರಿಸಿತು. ಸರ್ಕಾರದಿಂದ ಈ ಸೌಲಭ್ಯವನ್ನು ಚಿತ್ರರಂಗಕ್ಕೆ ದೊರಕಿಸಿಕೊಡುವಲ್ಲಿ ಪ್ರಸ್ತುತ ವಾಣಿಜ್ಯಮಂಡಳಿಯ ಪಾತ್ರ ಉಲ್ಲೇಖನೀಯ.

ಚಿತ್ರಸಮಾಜಗಳು ಮತ್ತು ವಾಣಿಜ್ಯ ಮಂಡಳಿ

ವಾಣಿಜೈತರ ಚಿತ್ರಗಳನ್ನು ಪುರಸ್ಕರಿಸುವ ಹಾಗೂ ಪ್ರಶಸ್ತಿ ವಿಜೇತ ಚಿತ್ರಗಳನ್ನು ಪ್ರದರ್ಶಿಸುವ ಪರಿಪಾಠರನ್ನು ಮಂಡಳಿ ಮೊದಲಿನಿಂದಲೂ ನಡೆಸಿಕೊಂಡು ಬಂದಿದೆ. ಭಾರತ ಸರ್ಕಾರದಡಿಯಲ್ಲಿ ನಡೆಯುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮಂಡಳಿಯ ಸದಸ್ಯರು ಪಾಲ್ಗೊಳ್ಳಲು ಅನುಕೂಲಕರವಾದ ವಾತಾವರಣವನ್ನು ಪ್ರತಿವರ್ಷವೂ ತಪ್ಪದೆ ಮಂಡಳಿ ನಿರ್ವಹಿಸಿಕೊಂಡು ಬಂದಿರುವುದಲ್ಲದೆ, ನಾಡಿನಲ್ಲಿ ವಿವಿಧ ಸಂಸ್ಥೆಗಳು ನಡೆಸಹಿದ ಹಲವಾರು ಚಿತ್ರೋತ್ಸವಗಳಿಗೆ ಒತ್ತಾಸೆಯಾಗಿ ನಿಂತಿದೆ. ೧೯೭೭ರಲ್ಲಿ ಸುಚಿತ್ರಾ ಚಿತ್ರಸಮಾಜ ಮತ್ತು ಚಲನಚಿತ್ರ ಪತ್ರಕರ್ತರ ಪರಿಷತ್ ಏರ್ಪಡಿಸಿದ್ದ ಬೃಹತ್ ಚಿತ್ರೋತ್ಸವ 900೬ರಿಂದ ೨೦೦೯ರವರೆಗೆ ಸುಚಿತ್ರಾ ಸಮಾಜ ಸಂಘಟಿಸಿದ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವ ೨೦೦೮ರಿಂದ ಚಿನ್ಸ್ ಇಂಡಿಯಾ ಸಂಸ್ಥೆ ನಡೆಸುತ್ತಿರುವ ಅಂತರರಾಷ್ಟ್ರೀಯ ಚಿತ್ರೋತ್ಸವ, ೨೦೦೮-೦೯ರಲ್ಲಿ ಬೆಂಗಳೂರಿನಲ್ಲಿ ನಡೆಸ ಜರ್ಮನ್ ಚಿತ್ರೋತ್ಸವ, ೨00೯ರಲ್ಲಿ ಬೆಂಗಳೂರಿನಲ್ಲಿ ನಡೆದ ಭಾರತೀಯ ಚಿತ್ರರಂಗದ ಪ್ಲಾಟಿನಂ ವರ್ಷಾಚರಣೆಯ ಸಂದರ್ಭದಲ್ಲಿ ನಡೆದ ಚಿತ್ರೋತ್ಸವ ಹೀಗೆ ಹಲವಾರು ಉತ್ತಮ ಅಂತರರಾಷ್ಟ್ರೀಯ ಚಿತ್ರೋತ್ಸವಗಳನ್ನು ನೇರವಾಗಿ ತಾನೇ ನಿರ್ವಹಿಸದಿದ್ದರೂ ಸಹ ಉತ್ಸಾಹದಿಂದ ಮುಂದೆ ಬರುವ ಹಲವಾರು ಸಂಸ್ಥೆಗಳಿಗೆ ಉತ್ತೇಜನ ನೀಡುವಂತಹ ಉತ್ತಮ ಕಾರ್ಯಗಳನ್ನು ಮಂಡಳಿ ಪಾಲಿಸಿಕೊಂಡು ಬಂದಿದೆ.

ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ಹಿಗ್ಗಿಸುವ ಪ್ರಯತ್ನವಾಗಿ ೧೯೭೮ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಳಿಗೆಯೊಂದನ್ನು ತೆರೆದ ಮಂಡಳಿ ಹಲವಾರು ವರ್ಷಗಳ ಕಾಲ ಆ ಸಂಪ್ರದಾಯವನ್ನು ವಾಲಿಸಿಕೊಂಡ-ಬಂದದ್ದಲ್ಲದೆ ನೆರೆಯ ರಾಜ್ಯಗಳ ರಾಜಧಾನಿಗಳಲ್ಲಿ ಚಿತ್ರೋತ್ಸವಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕನ್ನಡ ಚಿತ್ರಗಳಿಗೆ ಗಡಿಯಾಒ ಮಾರುಕಟ್ಟೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆ.

ಸುವರ್ಣ ಮಹೋತ್ಸವ ಆಚರಣೆ

೧೯೯೪ರಲ್ಲಿ ಮಂಡಳಿಗೆ ೫೦ ವರ್ಷಗಳು ತುಂಬಿದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಚಿತ್ರೋದ್ಯಮಕ್ಕೆ ಸೇವೆ ಸಲ್ಲಿಸಿದ ಹಲವಾರು ದಿಗ್ಗಜರನ್ನು, ನಿಕಟಪೂರ್ವ ಅಧ್ಯಕ್ಷರುಗಳನ್ನು ಅಲ್ಲದೆ ಚಿತ್ರೋದ್ಯಮಕ್ಕೆ ನೆರವು ನೀಡಿದ ರಾಜಕಾರಣಿಗಳನ್ನು ಸಹ ಮಂಡಳಿ ಸ್ಮರಿಸಿಕೊಂಡು ಸತ್ಕರಿಸಿತಲ್ಲದೆ ಈ ಸಂದರ್ಭದಲ್ಲಿ ಆಕರ್ಷಕವಾದ ಸ್ಮರಣಸಂಚಿಕೆಯೊಂದನ್ನು ಸಹ ಹೊರತಂದಿತು.

೧೯೩೪ರಿಂದ ೨೦೦೦ದವರೆಗೆ ಚಿತ್ರರಂಗ ನಡೆದುಬಂದ ದಾಖಲೆಗಳನ್ನು ಸಮಗ್ರವಾಗಿ ದಾಖಲಿಸುವ ಪ್ರಯತ್ನವಾಗಿ ಇತಿಹಾಸದ ಬೃಹತ್ ಸಂಪುಟಗಳನ್ನು ಹೊರತರುವ ಜವಾಬ್ದಾರಿಯನ್ನು ಹಂಪಿ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಮಂಡಳಿ ಕೈಗೆತ್ತಿಕೊಂಡು ಅನುಭವೀ ಚಲನಚಿತ್ರ ಇತಿಹಾಸಕಾರರ, ಪತ್ರಕರ್ತರ ಮತ್ತು ಉದ್ಯಮದಲ್ಲಿ ನುರಿತ ತಜ್ಞರ ತಂಡವೊಂದು ಈ ಮಹಾನ್ ಕೆಲಸವನ್ನು ಮಾಡಿ ಸಂಪುಟಗಳನ್ನು ಹೊರತಂದರು. ಅದರಲ್ಲಿ ಕೆಲವು ಲೋಪದೋಷಗಳ ಪರಿಣಾಮ ಕೂಡಲೇ ಅದನ್ನು ಹಿಂಪಡೆಯಬೇಕಾದ ಅನಿವಾರ್ಯತೆಯೂ ಬಂದೊದಗಿತು.

Reach KFCC Now !

Contact us today to schedule a consultation or to learn more about our services.
Scroll to Top